ಹೇಗಾಯಿತು ಹೊಸ ವರುಷ

ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? … Continue reading ಹೇಗಾಯಿತು ಹೊಸ ವರುಷ